ಸಿಎಂ ಆಯ್ಕೆ ವಿಚಾರದಲ್ಲಿ ನನಗೆ ಸಂಪೂರ್ಣ ಸಂತೋಷವಿಲ್ಲ: ಸಂಸದ ಡಿ.ಕೆ ಸುರೇಶ್
Update: 2023-05-18 11:06 IST
ಹೊಸದಿಲ್ಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿರುವುದು ತುಂಬಾ ಬೇಸರವುಂಟುಮಾಡಿದೆ ಎಂದು ಡಿ.ಕೆ. ಶಿವಕುಮಾರ್ ಸಹೋದರ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕರ್ನಾಟಕದ ಹಿತದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಳ್ಳಬೇಕಾಯಿತು. ನನಗೆ ಈ ಬಗ್ಗೆ ಸಂಪೂರ್ಣ ಸಂತೋಷವಿಲ್ಲ. ಭವಿಷ್ಯದಲ್ಲಿ ಏನಾಗುತ್ತೆ ಎಂದು ಕಾದು ನೋಡುತ್ತೇವೆ' ಎಂದು ಹೇಳಿದರು.
'ನಾವು ಕೊಟ್ಟಿರುವ ಭರವಸೆಗಳನ್ನು ಈಡೆರಿಸಬೇಕಾಗಿದೆ. ಅದಕ್ಕಾಗಿ ಡಿಕೆಶಿ ಹೈಮಾಂಡ್ ನ ಈ ಸೂಚನೆಗೆ ಒಪ್ಪಕೊಳ್ಳಬೇಕಾಯಿತು' ಎಂದು ಸುರೇಶ್ ತಿಳಿಸಿದ್ದಾರೆ.