×
Ad

ರಾಜ್ಯದ ಜನರ ಭವಿಷ್ಯತ್ತಿಗಾಗಿ ಕಾಂಗ್ರೆಸ್ ಕುಟುಂಬ ನುಡಿದಂತೆ ನಡೆದುಕೊಳ್ಳಲಿದೆ: ಬಿ.ಕೆ ಹರಿಪ್ರಸಾದ್

Update: 2023-05-18 14:58 IST

ಬೆಂಗಳೂರು: ನೂತನವಾಗಿ ಆಯ್ಕೆಯಾದ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು.

ಜನರ ನಿರೀಕ್ಷೆ ಹಾಗೂ ನಮ್ಮ ಭರವಸೆಯನ್ನ ಈಡೇರಿಸುವ ಮೂಲಕ ದೇಶಕ್ಕೆ ಮಾದರಿ ಆಡಳಿತವನ್ನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರ ಭವಿಷ್ಯತ್ತಿಗಾಗಿ ಕಾಂಗ್ರೆಸ್ ಕುಟುಂಬ ನುಡಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Similar News