ಇನ್ನೂ ಸಾಕಷ್ಟು ದೂರ ಸಾಗಬೇಕಿದೆ, ನನಗೆ ಯಾವ ಬೇಸರವೂ ಇಲ್ಲ: ಡಿ.ಕೆ. ಶಿವಕುಮಾರ್
Update: 2023-05-18 18:20 IST
ಹೊಸದಿಲ್ಲಿ: ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಅವರು, ಜನರು ಇಂತಹ ದೊಡ್ಡ ಜನಾದೇಶವನ್ನು ನೀಡಿರುವಾಗ, ನಾವು ಖಂಡಿತವಾಗಿಯೂ ಸಂತೋಷಪಡಬೇಕು ಎಂದು ಹೇಳಿದ್ದಾರೆ.
ಡಿಸಿಎಂ ಪದವಿ ಪಡೆದ ಬಳಿಕ ANI ಜೊತೆ ನೀಡಿದ ಸಂದರ್ಶನದಲ್ಲಿ, “ಜನರಿಗೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಅದು ನಮ್ಮ ಮುಖ್ಯ ಧ್ಯೇಯ ಮತ್ತು ಕಾರ್ಯಸೂಚಿ, ಇದರಲ್ಲಿ ಬೇಸರ ಪಡಲು ಏನೂ ಇಲ್ಲ” ಎಂದು ಹೇಳಿದ್ದಾರೆ.
ಇನ್ನೂ ಸಾಕಷ್ಟ ದೂರಾ ಸಾಗಬೇಕಿದೆ. ನಾನು ಏಕೆ ಅಸಮಾಧನಗೊಳ್ಳಲಿ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
“ಎಲ್ಲವೂ ಚೆನ್ನಾಗಿದೆ ಮತ್ತು ಚೆನ್ನಾಗಿರುತ್ತದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಅದನ್ನು ಒಪ್ಪಿಕೊಂಡಿದ್ದೇವೆ” ಎಂದು ಶಿವಕುಮಾರ್ ಹೇಳಿದರು.