ಮೈಸೂರು: ರೌಡಿ ಶೀಟರ್ ಹತ್ಯೆ
Update: 2023-05-18 22:45 IST
ಮೈಸೂರು,ಮೇ.18: ನಗರದಲ್ಲಿ ಹಾಡುಹಗಲೆ ರೌಡಿ ಶೀಟರ್ ಚಂದ್ರು ಅಲಿಯಾಸ್ ಚಂದು ಎಂಬಾತನನ್ನು ಹತ್ಯೆ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ.
ನಗರದ ವಿವಿ ಮೊಹಲ್ಲಾದ ಕಾಳಿದಾಸ ರಸ್ತೆಯ ಮೋನ್ ಡ್ರೆಸ್ ಬಳಿ ನಿಂತಿದ್ದ ವೇಳೆ ನಾಲ್ಕು ಬೈಕ್‍ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳ ಪೈಕಿ ನಾಲ್ಕು ಮಂದಿ ಹಠಾತ್ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀರಕವಾಗಿ ಹತ್ಯೆ ಮಾಡಿದ್ದಾರೆನ್ನಲಾಗಿದೆ.
ಸ್ಥಳಕ್ಕೆ ವಿವಿ ಪುರಂ ಪೊಲೀಸರು ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.