ಉಪಮುಖ್ಯಮಂತ್ರಿ ಹುದ್ದೆ ಕೇಳಿಲ್ಲ: ಡಾ. ಜಿ ಪರಮೇಶ್ವರ್
Update: 2023-05-19 12:29 IST
ಬೆಂಗಳೂರು: ನಾನು ಉಪಮುಖ್ಯಮಂತ್ರಿ ಹುದ್ದೆ ಕೇಳಿಲ್ಲ. ಉಪಮುಖ್ಯಮಂತ್ರಿ ಹುದ್ದೆಗಾಗಿ ಯಾರನ್ನೂ ಸಮೀಪಿಸಿಲ್ಲ ಎಂದು ಸ್ವತಃ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಜನ ನಿಬಿಡ ಪರಿಸ್ಥಿತಿಯುಂಟಾದ ಕಾರಣ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜನ ಸಂದಣಿ ಕಡಿಮೆಯಾದ ಬಳಿಕ ತೆರಳಿ ಅಭಿನಂದಿಸಿದ್ದೇನೆ. ಆದರೆ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರಲ್ಲೂ ಮಾತನಾಡಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಎಲ್ಲವೂ ಒಳ್ಳೆಯದಾಗಿ ಕಾಣಿಸುತ್ತಿದೆ. ಜನರು ಬಹುಮತ ಕೊಟ್ಟಿದ್ದಾರೆ. ನಾನು ಭರವಸೆ ಕೊಟ್ಟಿದ್ದೇವೆ.ಅದನ್ನು ಈಡೆರಿಸಬೇಕಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.