×
Ad

ಬ್ಯಾನ್‌ ಮಾಡುವುದಿದ್ದರೆ ಏಕೆ ಪರಿಚಯಿಸಿದ್ದೀರಿ?: ನೋಟು ಹಿಂಪಡೆಯುವಿಕೆಗೆ ಸಿದ್ದರಾಮಯ್ಯ ಕಿಡಿ

"ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಬೇಸರದ ಸಂಗತಿ"

Update: 2023-05-19 21:24 IST

ಬೆಂಗಳೂರು: ರೂ. 2000 ಮುಖಬೆಲೆ ನೋಟನ್ನು ಹಿಂಪಡೆಯುವುದರ ಬಗ್ಗೆ ಕರ್ನಾಟಕದ ನಿಯೋಜಿತ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಟೀಕಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ. 

'ಪ್ರಧಾನಿ ನರೇಂದ್ರ ಮೋದಿಯವರಿಂದ ಮತ್ತೊಂದು ನೋಟು ನಿಷೇಧ. 2,000 ರೂ. ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದರೆ 2016ರಲ್ಲಿ ಅದನ್ನು ಏಕೆ ಪರಿಚಯಿಸಿದ್ದೀರಿ' ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ತಮ್ಮ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Similar News