ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೆ ಅವಮಾನ; ಮೆಡಿಕಲ್ ಕಾಲೇಜು ಡೀನ್ ವಿರುದ್ದ ಎಫ್ ಐ ಆರ್ ದಾಖಲು
Update: 2023-05-20 14:51 IST
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ನಿಂದನೆ ಮಾಡಿರುವ ಮೆಡಿಕಲ್ ಕಾಲೇಜು ಡೀನ್ ವಿರುದ್ದ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಚಾಮರಾಜನಗರ ಮೆಡಿಕಲ್ ಕಾಲೇಜ್ ಡೀನ್ ಡಾ. ಸಂಜೀವ್ ವಿರುದ್ಧ ಬಹುಜನ ಸಮಾಜ ಪಕ್ಷದ ಜಿಲ್ಲಾದ್ಯಕ್ಷ ನಾಗಯ್ಯ ದೂರು ನೀಡಿದ್ದಾರೆ.
ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಕಾಯ್ದೆ ಹಾಗೂ ರಾಷ್ಟ್ರ ನಾಯಕರ ನಿಂದನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.