×
Ad

ಪ್ರಧಾನಿ ಜಪಾನ್‌ಗೆ ಹೋದಾಗಲೆಲ್ಲಾ ನೋಟ್‌ ಬ್ಯಾನ್‌ ಮಾಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Update: 2023-05-20 17:38 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ಹೋದಾಗಲೆಲ್ಲಾ ಭಾರತದಲ್ಲಿ ನೋಟು ನಿಷೇಧ ಹೇರುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಆರೋಪಿಸಿದರು.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್‌ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಖರ್ಗೆ, “ಕಳೆದ ವಾರ ಪ್ರಧಾನಿ ಮೋದಿ ಜಪಾನ್‌ಗೆ ಹೋದಾಗ ರೂ. 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಈ ಬಾರಿ ಅವರು ರೂ 2,000 ನೋಟುಗಳನ್ನು ನಿಷೇಧಿಸಿದ್ದಾರೆ,” ಎಂದು ಹೇಳಿದರು.

“ಇಂತಹ ಕ್ರಮಗಳಿಂದ ದೇಶಕ್ಕೆ ಲಾಭವಿಲ್ಲ, ಬದಲು ನಷ್ಟವಾಗಲಿದೆ. ದೇಶದ ಜನರನ್ನು ಒಂದಲ್ಲ ಒಂದು ವಿಧದಲ್ಲಿ ತೊಂದರೆಗೊಳಪಡಿಸುವುದು ಮೋದಿ ಅವರಿಗೆ ಬೇಕಿದೆ.” ಎಂದ ಖರ್ಗೆ ಹೇಳಿದರು.

“ರಾಜ್ಯದ ಹೊಸ ಕಾಂಗ್ರೆಸ್‌ ಸರ್ಕಾರ ಹಿಂದಿನ ಸರ್ಕಾರದಂತಲ್ಲ. ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಅದು ಮುನ್ನಡೆಯಲಿದೆ. ಬಿಜೆಪಿಯಂತೆ ಮಾಡದೆ ಕಾಂಗ್ರೆಸ್‌ ಸರ್ಕಾರ ತನ್ನ ಮಾತುಗಳನ್ನು ಉಳಿಸಿಕೊಳ್ಳಲಿದೆ,” ಎಂದು ಖರ್ಗೆ ಹೇಳಿದರು.

Similar News