ಯುಪಿಎಸ್‍ಸಿ: ಮಂಡ್ಯದ ತನ್ಮಯ್, ಮನೋಜ್‍ಗೆ ರ‍್ಯಾಂಕ್
ಮಂಡ್ಯ, ಮೇ 24: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ) ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಾಲೂಕಿನ ಮಾಚಹಳ್ಳಿಯ ಎಂ.ಎಸ್.ತನ್ಮಯ್ 690ನೇ ರ‍್ಯಾಂಕ್ ಹಾಗೂ ಹಳೇಬೂದನೂರು ಗ್ರಾಮದ ಎಚ್.ಪಿ.ಮನೋಜ್ 929ನೇ ರ‍್ಯಾಂಕ್ ಪಡೆದಿದ್ದಾರೆ.
ಆರನೇ ಯತ್ನದಲ್ಲಿ ಯಶಸ್ವಿಯಾಗಿರುವ ತನ್ಮಯ್ ಪ್ರಸ್ತುತ ಹಾವೇರಿಯಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಡ್ಯ ಎಜುಕೇಷನ್ ಸೊಸೈಟಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಲ್ಲಿ ಎಂಜನಿಯರಿಂಗ್ ಪದವಿ ಪಡೆದಿದ್ದಾರೆ.
ಡಾ.ಬಿ.ಎಸ್.ಪುಟ್ಟಸ್ವಾಮಿ ಹೇಮಾ ದಂಪತಿ ಪುತ್ರರಾದ ಮನೋಜ್ ಒಡಿಶಾದ ಭುವನೇಶ್ವರ್ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದು, ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಮನೋಜ್ ದೆಹಲಿಯ ವಿದ್ಯುಚ್ಛಕ್ತಿ ನಿಗಮದಲ್ಲಿ ಐಇಎಸ್ ಅಧಿಕಾರಿಯಾಘಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ಪುಟ್ಟಸ್ವಾಮಿ ಬೆಂಗಳೂರಿನ ವಿವಿ ಪುರಂ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ.