×
Ad

ಭವಾನಿಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳಿಲ್ಲ: ಎಚ್ ಡಿ ರೇವಣ್ಣ ಸ್ಪಷ್ಟನೆ

Update: 2023-05-24 22:47 IST

ಬೆಂಗಳೂರು: ಭವಾನಿ ರೇವಣ್ಣ ಅವರಿಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಯಾರೂ ಯಾರಿಗೂ ಕೇಳಿಲ್ಲ. ಸಿ ಎಂ ಇಬ್ರಾಹಿಂ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಭವಾನಿ ರೇವಣ್ಣಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಕುರಿತು ನಾವ್ಯಾರು ಏನೂ ಕೇಳಿಲ್ಲ, ಅದರ ಬಗ್ಗೆ ಚರ್ಚೆಯೇ ಆಗಿಲ್ಲ, ಅದೆಲ್ಲ ಗಾಳಿ ಸುದ್ದಿ' ಎಂದರು. 

'ಎಚ್ ಡಿ ಕುಮಾರಸ್ವಾಮಿಯವರು ಶಾಸಕಾಂಗ ಪಕ್ಷದ ನಾಯಕರಾಗಿರುತ್ತಾರೆ. ಸಿಎಂ ಇಬ್ರಾಹಿಂ ಅವರೇ ಅಧ್ಯಕ್ಷರಾಗಿ ಮುಂದಿವರಿಯುತ್ತಾರೆ' ಎಂದು ಸ್ಪಷ್ಟಪಡಿಸಿದರು.

Similar News