ಶಿವಮೊಗ್ಗ | ವೇಶ್ಯಾವಾಟಿಕೆ ಚಟುವಟಿಕೆ ಆರೋಪ; ಇಬ್ಬರ ಬಂಧನ, 6 ಯುವತಿಯರ ರಕ್ಷಣೆ

Update: 2023-05-25 06:34 GMT

ಶಿವಮೊಗ್ಗ: ನಗರದ ಸ್ಪಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ಆರು ಯುವತಿಯರನ್ನು ರಕ್ಷಣೆ ಮಾಡಿರುವ ಘಟನೆ ವರದಿಯಾಗಿದೆ.

ನಗರದ ಕುವೆಂಪು ರಸ್ತೆಯಲ್ಲಿರುವ  ಸ್ಪಾ ಒಂದರ ಮಾಲಕರಾದ ವಿದ್ಯಾಶ್ರೀ‌ ಮತ್ತು ಇವರ ಪತಿ ಗೋಪಾಲ್ ಅವರು ಪರ ಊರುಗಳಿಂದ ಹುಡುಗಿಯರನ್ನು ಕರೆಸಿ ಅವರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ಈ ಹಿನ್ನಲೆಯಲ್ಲಿ ಖಚಿತ ಮಾಹಿತಿ‌ ಮೇರೆಗೆ ಎಸ್ ಪಿ  ಜಿ.ಕೆ ಮಿಥುನ್ ಕುಮಾರ್ ಹಾಗೂ ಎಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪವಿಭಾಗ-ಬಿ ಉಪಾಧೀಕ್ಷಕ ಸುರೇಶ್ ಎಂ ನೇತೃತ್ವದಲ್ಲಿ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರು ಮಂದಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಪ್ರಕರಣ ಸಂಬಂಧ  ಮಾಲೀಕರಾದ ವಿದ್ಯಾಶ್ರೀ‌ ಮತ್ತು ಗೋಪಾಲ್ ರನ್ನು ಬಂಧಿಸಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Similar News