ಕಲಬುರಗಿ: ಸಿಡಿಲು ಬಡಿದು ಯುವಕ ಮೃತ್ಯು, 6 ಜನರಿಗೆ ಗಂಭೀರ ಗಾಯ
Update: 2023-05-25 20:04 IST
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟು ಆರು ಜನರಿಗೆ ಗಾಯಗಳಾದ ಘಟನೆ ವರದಿಯಾಗಿದೆ.
ದಿಗ್ಗಾಂವ್ ಗ್ರಾಮದ ಭೀಮು ಪೂಜಾರಿ (18) ಮೃತ ಯುವಕ ಎಂದು ಗುರುತಿಸಲಾಗಿದೆ.
ಇದೇ ವೇಳೆಯಲ್ಲಿ ಕೋಡ್ಲಾ ಮತ್ತು ದಿಗ್ಗಾಂವ್ ಗ್ರಾಮದಲ್ಲಿ ಸಿಡಿಲು ಬಡಿದು ಆರು ಜನ ಗಂಭೀರ ಗಾಯಗೊಂಡಿರುವ ಘಟನೆಯೂ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
► ಹವಾಮಾನ ಇಲಾಖೆ ಎಚ್ಚರಿಕೆ;
ರಾಜ್ಯದ ಕಲಬುಗಿಯೂ ಸೇರಿದಂತೆ ಹಲವು ಜಿಲ್ಲೆಯಲ್ಲಿ ಸಂಜೆ ಆಥವಾ ತಡ ರಾತ್ರಿ ಭಾರಿ ಮಳೆ, ಬಿರುಗಾಳಿ ಮತ್ತು ಸಿಡಿಲು ಬೀಳುವ ಸಾಧ್ಯತೆ ಇದ್ದು, ಜನರು ಜಾನುವಾರು ಹಾಗೂ ತಮ್ಮ ಜೀವಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದರು.