ಪೊಕ್ಸೊ ಪ್ರಕರಣ: ಆರೋಪಿಗೆ 20 ವರ್ಷ ಜೈಲು

Update: 2023-05-25 16:20 GMT

ಬೆಂಗಳೂರು, ಮೇ.25: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಒಂದನೇಯ ಎಫ್‍ಟಿಎಸ್‍ಸಿ ಪೋಕ್ಸೋ ಕೋರ್ಟ್ ಆದೇಶ ಹೊರಡಿಸಿದೆ. 

ಜೊತೆಗೆ ಮೃತಳ ಕುಟುಂಬಕ್ಕೆ 9 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಕೊಲೆ ಕೇಸ್‍ನಲ್ಲಿ ಜೀವಾವಧಿ, ಪೊಕ್ಸೊ ಅಡಿ ನ್ಯಾ.ಕೆ.ಎನ್.ರೂಪಾ ಅವರು ಆದೇಶ ಹೊರಡಿಸಿದ್ದಾರೆ.

ಆರೋಪಿ ಸೋಮಸಂದ್ರಪಾಳ್ಯದ ರಾಜು.ಸಿ ಎಂಬಾತನಿಗೆ ಕೊಲೆ ಕೇಸ್‍ನಲ್ಲಿ ಜೀವಾವಧಿ, ಪೊಕ್ಸೊ ಅಡಿ 20 ವರ್ಷ ಜೈಲು ಶಿಕ್ಷೆ ಜೊತೆಗೆ 2 ಲಕ್ಷ 75 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಬಾಲಕಿಯೊಂದಿಗೆ ಗೆಳೆತನ ಮಾಡಿದ್ದ ರಾಜು, 2021ರ ಎಪ್ರಿಲ್ 3ರಂದು ಬಂಡೇಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ದೈಹಿಕ ಸಂಪರ್ಕ ಬೆಳೆಸಿ ಕೊಲೆ ಮಾಡಿದ್ದ ಆರೋಪವಿತ್ತು. ವಿಚಾರಣೆ ನಂತರ ಆರೋಪ ಸಾಬೀತಾಗಿತ್ತು.

ಕೋರ್ಟ್‍ನಲ್ಲಿ ಅಭಿಯೋಜನೆ ಪರವಾಗಿ ಎಸ್‍ಪಿಪಿ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶೆ ಕೆ.ಎನ್.ರೂಪಾ, ಆರೋಪಿಗೆ ಶಿಕ್ಷೆ ವಿಧಿಸಿದ್ದು, ಮೃತಳ ಕುಟುಂಬಕ್ಕೆ 9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ. 

Similar News