ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಹಿಂಪಡೆಯಲು ‘ಆ್ಯಮ್ನೆಸ್ಟಿ ಇಂಡಿಯಾ’ ಆಗ್ರಹ

Update: 2023-05-25 19:08 GMT

ಬೆಂಗಳೂರು, ಮೇ 25: ‘ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ‘ಹಿಜಾಬ್’ ಧರಿಸುವುದರ ಮೇಲೆ ಹೇರಿರುವ ನಿಷೇಧ ಹಿಂಪಡೆಯಬೇಕು’ ಎಂದು ರಾಜ್ಯ ಸರಕಾರಕ್ಕೆ ಆಮ್ನೆಸ್ಟಿ ಇಂಡಿಯಾ ಒತ್ತಾಯಿಸಿದೆ.

ಗುರುವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅಮ್ನೆಸ್ಟಿ ಇಂಡಿಯಾ, ‘ರಾಜ್ಯ ಸರಕಾರ ಮಾನವ ಹಕ್ಕುಗಳಿಗೆ ಆದ್ಯತೆ ನೀಡಬೇಕು. ಅದನ್ನು ಎತ್ತಿಹಿಡಿಯಬೇಕು. ಆದ್ಯತೆಯ ಮೇಲೆ ಸರಕಾರ ಕಾರ್ಯನಿರ್ವಹಿಸಬೇಕೆಂದು ಸಲಹೆ ಮಾಡಿದೆ.

ಅಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರ ಮೇಲೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಬೇಕು. ಹಿಜಾಬ್ ನಿಷೇಧವು ಮುಸ್ಲಿಮ್ ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಾಗಿದೆ. ಜತೆಗೆ ಧರ್ಮದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ಆಯ್ಕೆ ಅವಕಾಶವಿಲ್ಲದಂತೆ ಆಗಿದೆ ಎಂದು ಟೀಕಿಸಿದೆ.

ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಗಳು ಜನ ವಿರೋಧಿ, ಸಂವಿಧಾನ ವಿರೋಧಿಯಾಗಿದ್ದು, ಆ ಕಾಯ್ದೆಗಳ ಬಗ್ಗೆ ಮರುಪರಿಶೀಲನೆ ನಡೆಸಿ, ಕೂಡಲೇ ಅವುಗಳನ್ನು ರದ್ದುಗೊಳಿಸಬೇಕು ಎಂದು ಆಮ್ನೆಸ್ಟಿ ಇಂಡಿಯಾ ಆಗ್ರಹಿಸಿದೆ.

Similar News