ಬೈಕ್ ಗೆ ಟಿಪ್ಪರ್ ಢಿಕ್ಕಿ; ಬಾಲಕಿ ಸ್ಥಳದಲ್ಲೇ ಮೃತ್ಯು

Update: 2023-05-29 11:26 GMT

ಶಿವಮೊಗ್ಗ, ಮೇ.29: ಟಿಪ್ಪರ್ ಢಿಕ್ಕಿ ಹೊಡೆದು ಬೈಕ್ ನಲ್ಲಿ ತಂದೆಯೊಂದಿಗೆ ತೆರಳುತ್ತಿದ್ದ ಬಾಲಕಿ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪ ವರದಿಯಾಗಿದೆ.

15 ವರ್ಷದ ಐಶ್ವರ್ಯಾ ಮೃತಪಟ್ಟ ಬಾಲಕಿ. ತಂದೆಯೊಂದಿಗೆ ಬೈಕ್ ನಲ್ಲಿ ತೆರಳುವಾಗ ಪಿಳ್ಳಂಗಿರಿ ಬಳಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಐಶ್ವರ್ಯಾ ತಲೆ ಮೇಲೆ ಟಿಪ್ಪರ್ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂದೆಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News