ಮೊದಲು ನನ್ನ ಫ್ಲೆಕ್ಸ್​ಗಳನ್ನೇ ಕಿತ್ತು ಹಾಕಿ: ನಗರಸಭೆ ಅಧಿಕಾರಿಗಳಿಗೆ ಶಾಸಕ ಪ್ರದೀಪ್ ಈಶ್ವರ್​ ಸೂಚನೆ!

Update: 2023-05-29 18:04 GMT

ಚಿಕ್ಕಬಳ್ಳಾಪುರ: ಜಿಲ್ಲೆಯ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ನಗರದಲ್ಲಿ ನನ್ನದು ಯಾವುದೇ ಫ್ಲೆಕ್ಸ್ ಇರಬಾರದು ಎಂದು ನಗರಸಭೆ ಆಯುಕ್ತರಿಗೆ ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ.

ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿ ಮಾತನಾಡಿದ ಪ್ರದೀಪ್ ಈಶ್ವರ್​ ಅವರು, 'ನನ್ನ ಫ್ಲೆಕ್ಸ್ ಇರಬಾರದು, ಬೇರೆಯವರ ಫ್ಲೆಕ್ಸ್ ಕೂಡ ಇರಬಾರದು. ಚಿಕ್ಕಬಳ್ಳಾಪುರ ನಗರ ಕ್ಲೀನ್ ಆಗಿರಬೇಕು. ಶಾಸಕರ ಪೋಟೋ ಇದೆ ಅಂತ ಭಯ ಬೀಳಬೇಡಿ. ಮೊದಲು ನನ್ನದೇ ಫೋಟೋ ಕಿತ್ತು ಹಾಕಿ' ಎಂದರು.

'ಯಾರೇ ಒತ್ತಡ ಹಾಕಿದರೂ ತಲೆ ಕೆಡಿಸಿಕೊಳ್ಳಬೇಡಿ' ಎಂದೂ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

Similar News