RTE ಅಡಿಯಲ್ಲಿ ದಾಖಲಾದ ಮಕ್ಕಳಿಂದ ಹಣ ವಸೂಲಿ ಆರೋಪ: ಶಿಕ್ಷಣ ಇಲಾಖೆಗೆ ದೂರು

Update: 2023-05-30 17:09 GMT

ಬೆಂಗಳೂರು: ಖಾಸಗಿ ಶಾಲೆಗಳು RTE  ಅಡಿಯಲ್ಲಿ ಮಕ್ಕಳನ್ನು ಸೇರ್ಪಡೆ ಮಾಡಿಕೊಂಡು, ಅಂತಹ ಮಕ್ಕಳಿಂದಲೂ ಮನ ಬಂದತೆ ಹಣವನ್ನು ವಸೂಲಿ ಮಾಡುತ್ತಿವೆ ಎಂದು ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟವು ಆರೋಪಿಸಿದೆ.

ಈ ಕುರಿತು ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರನ್ನು ನೀಡಿದ್ದು, RTE  ಅಡಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಮಕ್ಕಳ 14 ವರ್ಷಗಳವರೆಗೆ ಉಚಿತ ಶಿಕ್ಷಣವನ್ನು ನೀಡಬೇಕು. ಆದರೆ ಖಾಸಗಿ ಶಾಲೆಗಳು ಈ ವಿದ್ಯಾರ್ಥಿಗಳ ಪೋಷಕರಿಂದಲೂ ಹಣವನ್ನು ವಸೂಲಿ ಮಾಡುತ್ತಿವೆ ಎಂದು ತಿಳಿಸಿದೆ.

ಹಣವನ್ನು ಪಾವತಿ ಮಾಡದಿದ್ದರೆ, ಅಂತಹ ಮಕ್ಕಳನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ವಿದ್ಯಾಭ್ಯಾಸಕ್ಕೆ  ತೊಂದರೆಯನ್ನುಂಟು ಮಾಡಲಾಗುತ್ತಿದೆ. ಆದುದರಿಂದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕು. ಹಾಗೆಯೇ ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಸಹಾಯಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದೆ.

Similar News