ತುಮಕೂರು: ಪರವಾನಗಿ ಇಲ್ಲದೆ ಕಳಪೆ ಬೀಜ, ರಾಸಾಯನಿಕ ಔಷಧಿ ಮಾರಾಟ; ಜಿಲ್ಲಾ ಕೃಷಿ ಇಲಾಖೆ ದಾಳಿ

Update: 2023-06-01 04:34 GMT

ಪಾವಗಡ: ರೈತರಿಗೆ ಅಕ್ರಮವಾಗಿ ರಸಗೊಬ್ಬರ ಕಳಪೆ ಬೀಜ ರಾಸಾಯನಿಕ ಔಷಧಿಗಳನ್ನು ಪರವಾನಗಿ ಇಲ್ಲದೆ   ಮಾರಾಟ ಮಾಡುತ್ತಿರುವ ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿ   ಔಷಧಿಗಳನ್ನು ಜಪ್ತಿ  ಮಾಡಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪಾವಗಡ ಪಟ್ಟಣದ  ಗೀತಾ ಟೆಂಡರ್  ಕೀಟನಾಶಕ  ಮಳಿಗೆ ಪರವಾನಿ ಹಾಗೂ ಅನುಮತಿ ಇಲ್ಲದೆ ದಾಖಲಾತಿ ಇಲ್ಲದೆ BronoPol (Bactinas-200)(2Bromo-2 ನಿತ್ರೋ Prompane-1,3-Diol) ಶಿಲೀಂದ್ರ ನಾಶಕ ಅಥವಾ ಕೀಟನಾಶಕವನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದು 135.ಕೆ.ಜಿ( ಅಂದಾಜು  3,91,500 ರೂ ರೂವನ್ನು ಮಾಜರು ಮೂಲಕ ಸಂಚಾರ ಸಮಕ್ಷಮದಲ್ಲಿ ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದರು.

ಈ ಸಂಬಂಧಿಸಿದ ಮಾರಾಟಗಾರರು ಸರಬರಾಜು ಉತ್ಪಾದಕರಿಗೆ ನೋಟಿಸು ಜಾರಿ ಮಾಡಿ ದಾಖಲಾತಿಗಳನ್ನು ಸಲ್ಲಿಸಲು ಕೈಗೊಳ್ಳಲಾಗಿದೆ ಸದರಿ ಜಪ್ತಿಯನ್ನು ಮಾನ್ಯ ಸ್ಥಳೀಯ ನ್ಯಾಯಾಲಯದ ಗಮನಕ್ಕೆ ತಂದು ಕೀಟನಾಶಕ ಕಾಯ್ದೆ 1968 ಮತ್ತು ನಿಯಮಗಳ 1971ರ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು  ಮಾಹಿತಿ ಕೊಟ್ಟರು.

ಜಪ್ತಿ  ಕಾರ್ಯವನ್ನು ಪುಟ್ಟರಂಗಪ್ಪ ಕೀಟನಾಶಕ ಪರಿವೀಕ್ಷಕರು  ಹಾಗೂ ಸಹಾಯಕ ಕೃಷಿ ನಿರ್ದೇಶಕರು ಜಾರಿದಳ ಜಂಟಿ ಕೃಷಿ ನಿರ್ದೇಶಕ ಕಚೇರಿ ತುಮಕೂರು ಜಿಲ್ಲೆ ಇವರು ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಸಬಾ ಕೃಷಿ ಅಧಿಕಾರಿ  ವೇಣುಗೋಪಾಲ. ರೈತ ಸಂಪರ್ಕ ಕೇಂದ್ರ ಎಟಿಎಂ ಬೀರೇಂದ್ರಬಾಬು  ಸೇರುತ್ತದೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Similar News