ಪೂರ್ವಾನುಮತಿ ಪಡೆಯದೆ ಪ್ರಚಾರ: ಡಿ.ಕೆ.ಸುರೇಶ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2023-06-04 14:17 GMT

ಬೆಂಗಳೂರು, ಜೂ.4: ಲೋಕಸಭೆ ಚುನಾವಣೆ ವೇಳೆ ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆಯದೆ ಶಿವಮೊಗ್ಗದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದ ಆರೋಪ ಸಂಬಂಧ ಸಂಸದ ಡಿ.ಕೆ.ಸುರೇಶ್ ವಿರುದ್ಧದ ದೂರು ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ. 

ಡಿ.ಕೆ.ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

2019ರ ಎಪ್ರಿಲ್ 20ರಂದು ಸಂಜೆ 5 ಗಂಟೆ ಸಮಯದಲ್ಲಿ ಹಿರಿಯೂರು ಬಯಲು ರಂಗಮಂದಿರ ಎದುರು ಡಿ.ಕೆ.ಸುರೇಶ್ ಅವರು ತೆರೆದ ವಾಹನದ ಮೂಲಕ ಚುನಾವಣಾ ಪ್ರಚಾರ ಮತ್ತು ಮೆರವಣಿಗೆ ನಡೆಸುತ್ತಿದ್ದರು. 

ಅದಕ್ಕಾಗಿ ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಚಕ್ಷಣಾ ದಳದ ಅಧಿಕಾರಿಯಾಗಿದ್ದ ಎಂ ಈಶ್ವರಪ್ಪ ಅವರು ಭದ್ರಾವತಿ ಪೇಪರ್ ಟೌನ್ ಠಾಣೆಗೆ ದೂರು ನೀಡಿದ್ದರು.

Similar News