ಬಿಎಂಟಿಸಿ, ಐಷಾರಾಮಿ ಹೊರತುಪಡಿಸಿ ಸಾರಿಗೆ ಬಸ್ ಗಳಲ್ಲಿ ಶೇ.50ರಷ್ಟು ಆಸನ ಪುರುಷರಿಗೆ ಮೀಸಲು!

Update: 2023-06-05 13:33 GMT

ಬೆಂಗಳೂರು: ಇನ್ನು ಮುಂದೆ ಸಾರಿಗೆ ಬಸ್ ಗಳಲ್ಲಿ ಶೇ.50ರಷ್ಟು ಆಸನಗಳು ಮೀಸಲು ಎಂಬ ಫಲಕವನ್ನು ನೋಡಲಿದ್ದೇವೆ.

ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿ ಯೋಜನೆ’ ಜಾರಿಗೊಳಿಸಲು ರಾಜ್ಯ ಸರಕಾರ ಸೋಮವಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ. 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್ಸಾರ್ಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲ ಬಸ್‍ಗಳಲ್ಲಿ(ಎಸಿ, ಐಷರಾಮಿ ಬಸ್ ಹೊರತುಪಡಿಸಿ) ಶೇ.50ರಷ್ಟು ಆಸನಗಳನ್ನು ಪುರುಷರಿಗೆ ಕಾಯ್ದಿರಿಸತಕ್ಕದ್ದು ಎಂದು ರಾಜ್ಯ ಸರಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. 

ಯಾವ ಬಸ್‍ಗಳಲ್ಲಿ 'ಶಕ್ತಿ' ಯೋಜನೆ ಅನ್ವಯಿಸುವುದಿಲ್ಲ?

ಸಾರಿಗೆ ಸಂಸ್ಥೆಯ ಐಷಾರಾಮಿ ಬಸ್‍ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್ ಹಾಗೂ ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲೆಸ್(ಎಸಿ ಬಸುಗಳು) ಬಸ್‍ಗಳಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಾರಿಗೆ ಬಸ್‍ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ‘ಸ್ಮಾರ್ಟ್‍ಕಾರ್ಡ್’

Similar News