'ಸ‌ಆದಾ ಡಿಸೆನಿಯಂ- ವಿಷನ್-26'ಗೆ ಎ.ಪಿ.ಉಸ್ತಾದರಿಂದ ಚಾಲನೆ

Update: 2023-06-06 10:39 GMT

ಶಿವಮೊಗ್ಗ: ಶಿವಮೊಗ್ಗ ನಗರದ ವಾದಿ ಹುದಾದಲ್ಲಿ ಕಾರ್ಯಾಚರಣೆ ಮಾಡುತ್ತಿರುವ 'ಮರ್ಕಝ್ ಸ‌ಆದಾ' ದ ಹತ್ತನೇ ವರ್ಷಾಚರಣೆಯ ಅಭಿಯಾನ 'ಸ‌ಆದಾ ಡಿಸೆನಿಯಂ -ವಿಷನ್ 26' ಗೆ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಉಸ್ತಾದ್ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಸಂಸ್ಥೆಯ 8ನೇ ಸ್ಥಾಪಕ ದಿನವಾದ ಇಂದು (ಜೂನ್ 6) ಕಾರಂದೂರ್ ಮರ್ಕಝ್‌ನಲ್ಲಿ, ಮೂರು ವರ್ಷಗಳ ಕಾಲ ನಡೆಯುವ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು,  2026 ಜೂನ್ 6ವರೆಗೆ ವೈವಿಧ್ಯಮಯ ಕಾರ್ಯಕರ್ಮಗಳೊಂದಿಗೆ ದಶಮಾನೋತ್ಸವ ನಡೆಯಲಿದೆ.

ಇದರ ಭಾಗವಾಗಿರುವ 'ವಿಷನ್-26' ನ ಅಂಗವಾಗಿ ನೂತನವಾಗಿ ಹತ್ತು ಸಂಸ್ಥೆಗಳು ಹಾಗೂ ಹತ್ತು ಯೋಜನೆಗಳನ್ನು 'ಹೈಲಾಂಡ್ ಎಜು ಸಿಟಿ' ಹೊಸ ಮಂಡಳಿಯ ಆಶ್ರಯದಲ್ಲಿ  ಜಾರಿಗೆ ತರಲಾಗುವುದು.

ಚಾಲನಾ ಸಮಾವೇಶದಲ್ಲಿ ಹೈಲಾಂಡ್ ಎಜುಸಿಟಿ ಅಧ್ಯಕ್ಷ ಸಯ್ಯಿದ್ ಶಹೀದುದ್ದೀನ್ ಬಾಖವಿ ಅಲ್ ಬುಖಾರಿ ಶಿವಮೊಗ್ಗ ತಂಙಳ್, ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸ‌ಅದಿ ಹಂಡುಗುಳಿ ,ಎಡ್ಮಿನಿಸ್ಟ್ರೇಟರ್ ಅಬ್ದುಲ್ಲತೀಫ್ ಸ‌ಅದಿ ಶಿವಮೊಗ್ಗ, ಸಯ್ಯಿದ್ ಕುಂಞಿಕೋಯ ತಂಙಳ್  ವೆಂಙಾಡ್, ಸಯ್ಯಿದ್ ನೌಫಲ್ ಬುಖಾರಿ ಖತರ್, ಸಯ್ಯಿದ್ ಶಾಕಿರ್ ಮುಈನಿ ವಳಾಂಜೇರಿ, ಹುಸೈನ್ ಹಾಜಿ ಖತರ್, ಅಲೀ ಫಾಳಿಲಿ ಕೋಝಿಕೋಡ್, ಮಾಲಿಕ್ ದೀನಾರ್ ಚೆತ್‌ಲತ್, ಲಕ್ಷದ್ವೀಪ್ ಮುಂತಾದವರು ಪಾಲ್ಗೊಂಡಿದ್ದರು.

Similar News