ಪೊಕ್ಸೊ ಕಾಯಿದೆ: ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಗೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2023-06-07 14:22 GMT

ಬೆಂಗಳೂರು, ಜೂ.7: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ನೀಡಬಹುದಾದ 2012ರ ಪೋಕ್ಸೋ ಕಾಯಿದೆ ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಅಪ್ರಾಪ್ತೆಯೊಬ್ಬರಿಗೆ ಗರ್ಭಪಾತ ಮಾಡಿದ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ. 

ಚಿಕ್ಕಮಗಳೂರಿನ ಆಸ್ಪತ್ರೆಯೊಂದರ ಮುಖ್ಯಸ್ಥ ಡಾ.ಚಂದ್ರಶೇಖರ್ ತಮ್ಮ ವಿರುದ್ಧದ ಆರೋಪ ಪಟ್ಟಿ ಮತ್ತು ಪ್ರಕರಣವನ್ನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ  ಅರ್ಜಿಯನ್ನು ವಜಾಗೊಳಿಸಿ, ಈ ನಿರ್ದೇಶನ ನೀಡಿದೆ. 

ಪೊಕ್ಸೊ ಕಾಯಿದೆಯ ಸೆಕ್ಷನ್ 19ರ ಪ್ರಕಾರ ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯ ಕುರಿತಂತೆ ಮಾಹಿತಿ ಸಿಕ್ಕ ತಕ್ಷಣ ವಿಳಂಬ ಮಾಡದೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬುದಾಗಿದೆ. ಆದರೆ, ಅರ್ಜಿದಾರ ವೈದ್ಯರು, ಸಂತ್ರಸ್ತೆಯ ವಯಸ್ಸು 12 ವರ್ಷ ಎಂಬುದಾಗಿ ಗೊತ್ತಾಗಿಲ್ಲ. ಹೀಗಾಗಿ ದೂರು ನೀಡಲು ಮುಂದಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. 

ಆದರೆ, ಅರ್ಜಿದಾರ ಸ್ತ್ರೀರೋಗ ತಜ್ಞರಾಗಿದ್ದು ಸುಮಾರು 35 ವರ್ಷಗಳ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮುಂದುವರೆಸುತ್ತಿರುವುದಾಗಿ ವಿವರಿಸಿದ್ದಾರೆ. ಸಂತ್ರಸ್ತೆ ಸೀರೆ ತೊಟ್ಟಿದ್ದಳು ಎಂಬುದಾಗಿ ವಯಸ್ಸನ್ನು ಪರಿಗಣಿಸಿ ಚಿಕಿತ್ಸೆ ನೀಡಿರುವುದಾಗಿ ಹೇಳಿದ್ದಾರೆ. ಅರ್ಜಿದಾರರ ವಿರುದ್ದದ ಅಪರಾಧ ಭಯಾನಕವಾಗಿದ್ದು, ವಿಚಾರಣೆ ಮುಂದುವರೆಯಬೇಕಾಗಿದೆ.

ಅಲ್ಲದೆ, ಹಲವು ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿರುವ ವೈದ್ಯರು, ಅಪ್ರಾಪ್ತರ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕಾಗಿದ್ದು, ಪೊಲೀಸರಿಗೆ ತಿಳಿಸುವ ಜವಾಬ್ದಾರಿ ಇದೆ. ಇದನ್ನು ಮಾಡದಿರುವುದು ಗಂಭೀರ ಲೋಪವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

12 ವರ್ಷದ ಸಂತ್ರಸ್ತೆಯು ಕೆಲವು ಸಂಬಂಧಿಕರೊಂದಿಗೆ 2022ರ ಡಿ.17ರಂದು ಅರ್ಜಿದಾರರ ಆಸ್ಪತ್ರೆಗೆ ತೀವ್ರತರದ ರಕ್ತಸ್ರಾವದಿಂದ ಆಗಮಿಸಿ ಚಿಕಿತ್ಸೆ ನೀಡುವಂತೆ ಕೋರಿದ್ದರು. 

Similar News