ಕೊನೆಗೂ ಉಪಸಭಾಪತಿ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ

ಒಂದು ವರ್ಷದ ಬಳಿಕ ಸಚಿವ ಸ್ಥಾನ?

Update: 2023-06-08 09:01 GMT

ಬೆಂಗಳೂರು, ಜೂ.8: ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ ಅವರು ಕೊನೆಗೂ ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ. 

ಈ ಬಗ್ಗೆ ಗುರುವಾರ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಂಗಶೆಟ್ಟಿ, 'ನಾನು ವರಿಷ್ಠರ ಸೂಚನೆಯಂತೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ. ಒಂದು ವರ್ಷದ ನಂತರ ಸಚಿವ ಸ್ಥಾನ ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ' ಎಂದು ತಿಳಿಸಿದರು. 

ಸಚಿವ ಸ್ಥಾನ ವಂಚಿತ ಶಾಸಕ ಪುಟ್ಟರಂಗಶೆಟ್ಟಿರವರು ತಮಗೆ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನ ಬೇಡ, ಮುಂದೆ ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಇದೀಗ ವರಿಷ್ಠರ ಸೂಚನೆಯಂತೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದಾರೆ.  

ಇದನ್ನೂ ಓದಿಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರ; ಅಚ್ಚರಿಯ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್

Similar News