ವಿರಾಜಪೇಟೆ: ಯುವತಿ ಆತ್ಮಹತ್ಯೆ
Update: 2023-06-09 13:58 IST
ಮಡಿಕೇರಿ ಜೂ.9 :ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ.
ದೀಕ್ಷಿತ (21) ಎಂಬಾಕೆಯೇ ಮೃತ ಯುವತಿಯಾಗಿದ್ದು, ಈಕೆ ವಿರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದ ಸದ್ಯ ವಿರಾಜಪೇಟೆ ಪಟ್ಟಣದಲ್ಲಿ ವಾಸವಿರುವ ದಿ.ನಾಣಯ್ಯ ಹಾಗೂ ಸರಸ್ವತಿ ದಂಪತಿಯ ದ್ವಿತೀಯ ಪುತ್ರಿ ಎಂದು ತಿಳಿದು ಬಂದಿದೆ.
ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ದೀಕ್ಷಿತಾಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.