ಮುಖ್ಯಮಂತ್ರಿ , ಇಬ್ಬರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಇಲ್ಲ!

Update: 2023-06-09 11:58 GMT

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಆದರೆ, ಗಮನಾರ್ಹ ವಿಷಯವೇನೆಂದರೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹಿಮ್ ಖಾನ್ ಅವರಿಗೆ ಯವುದೇ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಯಾವುದೇ ಉಸ್ತುವಾರಿ ವಹಿಸಿಕೊಂಡಿಲ್ಲ.

ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಉಸ್ತುವಾರಿ ವಹಿಸಿಕೊಳ್ಳುವುದಿಲ್ಲ, ಆದರೆ ಕಳೆದ ಅವಧಿಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕೆ ಸಚಿವರಾಗಿದ್ದ ಆರ್.ಅಶೋಕ್ ಹಾಗೂ ಸೋಮಣ್ಣ ನಡುವೆ ತೀವ್ರ ಪೈಪೋಟಿ ಇದ್ದ ಕಾರಣ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಂಡಿದ್ದರು. 

ಉಳಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್​ ಗೆ ಬೆಂಗಳೂರು ನಗರ ಉಸ್ತುವಾರಿ ನೀಡಿದರೆ, ಮೈಸೂರು ಜಿಲ್ಲೆಗೆ ಸಿದ್ದರಾಮಯ್ಯರ ಆಪ್ತ ಎಚ್.ಸಿ ಮಹದೇವಪ್ಪರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಮತ್ತೋರ್ವ ಮೈಸೂರು ಜಿಲ್ಲೆಯ ಸಚಿವ ವೆಂಕಟೇಶ್ ಗೆ ಪಕ್ಕದ ಜಿಲ್ಲೆಯ ಚಾಮರಾಜ ನಗರ ಉಸ್ತುವಾರಿ ನೀಡಲಾಗಿದೆ.  

ಇನ್ನು  ರಹಿಮ್ ಖಾನ್ ಹಾಗೂ ಈಶ್ವರ ಖಂಡ್ರೆ ಬೀದರ್ ಜಿಲ್ಲೆಯವರಾಗಿದ್ದು, ಬೀದರ್ ಜಿಲ್ಲೆಯ ಉಸ್ತುವಾರಿಯನ್ನಾಗಿ ಈಶ್ವರ ಖಂಡ್ರೆ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿ | ಸಂಪೂರ್ಣ ಪಟ್ಟಿ ಇಲ್ಲಿದೆ

Similar News