ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪದ್ಭರಿತ ಆದಾಯವನ್ನು ಲೂಟಿ ಮಾಡುವ ಎಟಿಎಂಗಳು: ಕುಮಾರಸ್ವಾಮಿ
Update: 2023-06-10 14:24 IST
ಬೆಂಗಳೂರು: ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಹಿಂದಿನ ಸರಕಾರದಲ್ಲಿನ ಅಕ್ರಮಗಳನ್ನು ತನಿಖೆ ಮಾಡುವ ಸರಕಾರ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 40% ಕಮಿಷನ್ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡಿದ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದ ಮೇಲೆ ಸತ್ಯಾಂಶವನ್ನು ಹೊರಗೆ ತಂದಿದ್ದಾರಾ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪದ್ಭರಿತ ಆದಾಯವನ್ನು ಲೂಟಿ ಮಾಡುವ ATM ಗಳು ಟೀಕಿಸಿದರು.
ಜಾತಿಯ ವ್ಯಾಮೋಹ ಬಿಟ್ಟು ನಾಡಿನ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಉತ್ತಮವಾದ ಸರಕಾರ ತರುವ ವರೆಗೆ ಪರಸ್ಪರ ಟೀಕಿಸುವ ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತವೆ. ಈ ಸರಕಾರದ ಒಳ್ಳೆಯ ಕೆಲಸಗಳಿಗೆ ನಮ್ಮ ಬೆಂಬಲವಿದೆ. ಲೂಟಿ ಮಾಡುವ ಕೆಲಸಗಳಿಗೆ ಬೆಂಬಲ ಇಲ್ಲ ಎಂದು ತಿಳಿಸಿದರು.