×
Ad

ನಾವು ಹೇಳಿದ ಭರವಸೆಗಳನ್ನು ಈಡೇರಿಸಿಕೊಂಡು ಹೋಗುತ್ತೇವೆ: ಸಿ ಎಂ ಸಿದ್ದರಾಮಯ್ಯ

Update: 2023-06-11 14:45 IST

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಐದು ವರ್ಷಗಳ ಅವಧಿಯಲ್ಲಿ ಈಡೇರಿಸಬೇಕಾದಂತಹ ಭರವಸೆಗಳಾಗಿದ್ದು, ಫಲಿತಾಂಶದ ಬಳಿಕ ಯೋಜನೆಗಳ ಜಾರಿ ಬಗ್ಗೆ ಹಲವು ಬಾರಿ ಸಭೆ ನಡೆಸಿ ಇದೀಗ ಶಕ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಗ್ಯಾರಂಟಿಗಳು ಅನುಷ್ಠಾನ ಆಗುವುದಿಲ್ಲ ಎಂದು ವಿರೋಧ ಪಕ್ಷಗಳು ಗೇಲಿ ಮಾಡಿದ್ದವು. ಅನುಷ್ಠಾನ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಲಘುವಾಗಿ ಮಾತನಾಡಿದ್ದರು. ವಿರೋಧ ಪಕ್ಷದವರು ಗೊಂದಲ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಗೊಂದಲಗಳಿಲ್ಲ. ನಾವು ಹೇಳಿದ ಭರವಸೆಗಳನ್ನು ಈಡೇರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಶಕ್ತಿ ಯೋಜನೆಯ ಉಪಯೋಗವನ್ನು ಧರ್ಮ ಜಾತಿಗಳ ವ್ಯತ್ಯಾಸವಿಲ್ಲದೇ ಎಲ್ಲಾ ಮಹಿಳೆಯರು, ಮಂಗಳಮುಖಿಯರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು. ಪ್ರತಿವರ್ಷ ವಿದ್ಯುತ್ ದರ ಪರಿಷ್ಕರಣೆಯಾಗುತ್ತದೆ. ನಾವು  ವಿದ್ಯುತ್ ದರಗಳನ್ನು ಪರಿಷ್ಕರಣೆ ಮಾಡಿಲ್ಲ. ಫಲಿತಾಂಶದ ಹಿಂದಿನ ದಿನವಷ್ಟೇ ವಿದ್ಯುತ್ ದರ ಏರಿಕೆಯಾಗಿದೆ ಎಂದು ತಿಳಿಸಿದರು.

ಪದವಿ ಪಡೆದು ಆರು ತಿಂಗಳೊಳಗೆ ನಿರುದ್ಯೋಗಿಗಳು ಅರ್ಜಿ ಹಾಕಬೇಕು. ಆ ಬಳಿಕ 24 ತಿಂಗಳು ಪದವೀಧರರಿಗೆ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ ಭತ್ಯೆ ನೀಡುತ್ತೇವೆ. ಈ ಮಧ್ಯೆ ಉದ್ಯೋಗ ಲಭಿಸಿದ್ದಲ್ಲಿ ಭತ್ಯೆಯನ್ನು ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Similar News