×
Ad

'ಆಟಗಾರರ ಕಡೆಗಣನೆ': ಬೊಮ್ಮಾಯಿ ಸರ್ಕಾರದ ಅವಧಿಯ ಘಟನೆಯನ್ನು ಸಿದ್ದರಾಮಯ್ಯ ತಲೆಗೆ ಕಟ್ಟಿದ BJP ಬೆಂಬಲಿಗರು !

ವಾಸ್ತವಾಂಶ ಇಲ್ಲಿದೆ

Update: 2023-06-12 18:10 IST

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಸಂತೋಷ್‌ ಟ್ರೋಫಿ ಗೆದ್ದ ಕರ್ನಾಟಕ ತಂಡವನ್ನು ಮುಖ್ಯಮಂತ್ರಿಗಳು ರಸ್ತೆಯಲ್ಲಿ ಕೂರಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಿಸಿ ಹಲವು ಟ್ವೀಟ್‌ಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ. 

ಸೌದಿ ಅರೇಬಿಯಾದ ರಿಯಾದ್‌ ನಲ್ಲಿ ನಡೆದ ಸಂತೋಷ್ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕ ಫುಟ್ಬಾಲ್‌ ತಂಡವನ್ನು ರಸ್ತೆಯಲ್ಲಿ ಕೂರಿಸಿ ಅವಮಾನಿಸಲಾಗಿದೆ ಎಂದು ಪ್ರತಿಪಾದಿಸಿ ಹಲವು ಟ್ವೀಟ್‌ಗಳನ್ನು ಮಾಡಲಾಗಿದೆ. 

ಫುಟ್‌ಪಾತಿನಲ್ಲಿ ಫುಟ್ಬಾಲ್ ಆಟಗಾರರು ಕುಳಿತಿರುವ ವಿಡಿಯೋವನ್ನು ವೈರಲ್‌ ಮಾಡಲಾಗಿದ್ದು, ಆಟಗಾರರನ್ನು ಕರ್ನಾಟಕ ಸರ್ಕಾರ ಹೇಗೆ ನಡೆಸಿಕೊಂಡಿದೆ ಎನ್ನುವುದಕ್ಕೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರವನ್ನೂ ಉಲ್ಲೇಖಿಸಿ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. 

ಆದರೆ, ಸಿದ್ದರಾಮಯ್ಯ ಸರ್ಕಾರ ಫುಟ್‌ಬಾಲ್‌ ತಂಡದ ಆಟಗಾರರನ್ನು ಫುಟ್‌ಪಾತ್‌ನಲ್ಲಿ ಕೂರವಂತೇ ಮಾಡಿದರೇ ಎಂದು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಬೇರೆಯದ್ದೇ ವಾಸ್ತವಾಂಶಗಳು ಬಯಲಾಗಿವೆ. 

ಅಸಲಿಗೆ, ಈ ಪಂದ್ಯಾಕೂಟ ನಡೆದಿದ್ದೇ ಸಿದ್ದರಾಮಯ್ಯ ಸರ್ಕಾರ ರಚನೆಯಾಗುವ ಮುನ್ನ. ಇನ್ನೂ ಹೇಳಬೇಕಂದಾದರೆ, ಈ ಪಂದ್ಯಾಟದ ವೇಳೆ 2023 ರ ವಿಧಾನಸಭೆ ಚುನಾವಣೆಯೂ ನಡೆದಿರಲಿಲ್ಲ. 

ಮಾರ್ಚ್‌ 2023 ರಲ್ಲಿ ನಡೆದ ಘಟನೆ ಇದಾಗಿದ್ದು, ಈ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಿದ್ದರು. ಮಾಚ್‌ 4 ರಂದು ಪಂದ್ಯ ಗೆದ್ದು ಕರ್ನಾಟಕಕ್ಕೆ ಆಗಮಿಸಿದ ತಂಡ ರಸ್ತೆಯಲ್ಲಿ ಕೂತಿರುವ ಈ ವೈರಲ್ ವಿಡಿಯೋ ಘಟನೆ ನಡೆದಾಗ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದ್ದಿದುರಿಂದ ಸಿದ್ದರಾಮಯ್ಯ ಅವರನ್ನು ಟೀಕಿಸಿ ವೈರಲ್‌ ಮಾಡುತ್ತಿರುವ ಪೋಸ್ಟ್‌ಗಳು ತಪ್ಪು ಸಂದೇಶವಾಗಿದೆ. 

Similar News