×
Ad

ಕಾಂಗ್ರೆಸ್ ನ 'ಗಿಮಿಕ್' ಯೋಜನೆ ಲೋಕಸಭೆ ಚುನಾವಣೆ ನಂತರ ಉಳಿಯಲ್ಲ: ಶಾಸಕ ಬಿ.ವೈ. ವಿಜಯೇಂದ್ರ

Update: 2023-06-12 20:56 IST

ಹಾಸನ : 'ಕಾಂಗ್ರೆಸ್ ಪಕ್ಷದ ಗಿಮಿಕ್ ಯೋಜನೆಯ ಭರವಸೆ ಲೋಕಸಭೆ ಚುನಾವಣೆ ನಂತರ ಉಳಿಯುವುದಿಲ್ಲ ಎಂದು ಜನಸಾಮಾನ್ಯರೇ ಮಾತಾಡಿಕೊಳ್ಳುತ್ತಿದ್ದು, ಇನ್ನು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರವು ಚರ್ಚೆ ಆಗಿರುವುದಿಲ್ಲ' ಎಂದು ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ನಗರದ ಹೋಟೆಲೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಯತ್ತೇವೆ. ಜೆಡಿಎಸ್ ಜೊತೆ ಮೈತ್ರಿ ವಿಚಾರ ಚರ್ಚೆ ಆಗಿರುವುದಿಲ್ಲ. ಗ್ಯಾರೆಂಟಿ ವಿಚಾರದಲ್ಲಿ ಮಾತನಾಡಲು ಹೋದ್ರೆ ನಮ್ಮ ಬಗ್ಗೆಯೇ ಅಪ ಪ್ರಚಾರ ಮಾಡುತ್ತಾರೆ. ಗ್ಯಾರೆಂಟಿ ಕೊಟ್ಟ ರಾಜ್ಯಗಳು ಏನಾಗಿವೆ ಎಂಬುದನ್ನು ನೋಡಿದ್ದೇವೆ. ಪಂಜಾಬ್‍ನಲ್ಲಿ ಏನಾಗಿದೆ ಎಂಬುದನ್ನು ನೋಡಿದ್ದೇವೆ. ಈ ದೇಶದಲ್ಲಿ ನರೇಂದ್ರ ಮೋದಿಯವರಿಗೆ ಸಾಟಿಯಾದ ನಾಯಕ ಮತ್ತೊಬ್ಬರಿಲ್ಲ. ಅವರ ನಾಯಕತ್ವವನ್ನ ಜನರು ಒಪ್ಪಿಕೊಳ್ಳುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷದ ಮಂತ್ರಿಗಳೇ ಚುನಾವಣಾ ಸಂದರ್ಭದಲ್ಲಿ ಗಿಮಿಕ್‍ಗಾಗಿ ಯೋಜನೆ ಭರವಸೆ ನೀಡಿದ್ದೇವೆ ಎಂದಿದ್ದಾರೆ. ಕೆಲವರು ಇವೆಲ್ಲಾ ಲೋಕಸಭಾ ಚುನಾವಣೆವರೆಗು ಮಾತ್ರ ಎನ್ನುತ್ತಾರೆ. ಭರವಸೆ ನೀಡುವ ಸಂದರ್ಭ ಯಾವುದೇ ಷರತ್ತುಗಳನ್ನ ಹಾಕಿರಲಿಲ್ಲ. ಈಗ ಅನೇಕ ಷರತ್ತುಗಳನ್ನು ಹಾಕಿದ್ದಾರೆ. ಮುಂದೆ ಯಾವ ರೀತಿ ಯೋಜನೆಗಳನ್ನ ರೂಪಿಸುತ್ತಾರೆ ಕಾದು ನೋಡೋಣ ಎಂದು ಕುಟುಕಿದರು. 

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಆರ್.ಟಿ.ಸಿ. ನಿಗಮದ ರಾಜ್ಯ ಉಪಾಧ್ಯಕ್ಷ ಎಸ್.ಎನ್. ಈಶ್ವರಪ್ಪ, ಬಿಜೆಪಿ ಮಾಧ್ಯಮ ವಕ್ತಾರ ಐನೆಟ್ ವಿಜಿಕುಮಾರ್ ಇತರರು ಉಪಸ್ಥಿತರಿದ್ದರು.

Similar News