×
Ad

ಬಿಜೆಪಿಯ ಉರಿ ಶಮನಕ್ಕಾಗಿ 'ಬರ್ನಲ್ ಭಾಗ್ಯ': ಕಾಂಗ್ರೆಸ್ ತಿರುಗೇಟು

Update: 2023-06-13 18:35 IST

ಬೆಂಗಳೂರು:  'ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ "ಬರ್ನಲ್ ಭಾಗ್ಯ" ಕೊಡುವ ಬಗ್ಗೆ ಚಿಂತಿಸುತ್ತೇವೆ' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ. 

ರಾಜ್ಯ ಸರಕಾರದ 'ಶಕ್ತಿ' ಯೋಜನೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದ ವಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್,  ''ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಮಾಡಿ, ನೋಟು ನಿಷೇಧ ಮಾಡಿ ಸತ್ತ ನೂರಾರು ಮಂದಿಯ ಬಗ್ಗೆ ಈ ಕಾಳಜಿ ಇರಲಿಲ್ಲವೇಕೆ? ಹೆಚ್ಚುವರಿ ಬಸ್ ಗಳನ್ನು ಖರೀದಿಸಲು ಚಿಂತಿಸುತ್ತಿದ್ದೇವೆ, ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ'' ಎಂದು ಹೇಳಿದೆ. 

''ಬಿಜೆಪಿಯಲ್ಲಿ ಸೋಲಿನ ಆತ್ಮಾವಲೋಕನ ಮಾಡುವುದಕ್ಕಿಂತ ಪರಸ್ಪರ ಕೆಸರೆರಾಚಾಟ ನಡೆದಿದೆ, ಈ ಎರಚಾಟದಲ್ಲಿ ಕೆಸರು ಖಾಲಿಯಾಗಿ ಕಮಲ ಕರಕಲಾಗುವುದು ನಿಶ್ಚಿತ! ಅಧಿಕಾರದುದ್ದಕ್ಕೂ ಅಹಂಕಾರದಿಂದ ಅನಾಚಾರ ನಡೆಸಿ ಈಗ ಮೈಪರಚಿಕೊಂಡರೆ ಏನು ಉಪಯೋಗ?'' ಎಂದು ಮಾಜಿ ಶಾಸಕ ಸಿಟಿ ರವಿ ಹಾಗೂ ಸಂಸದ ಪ್ರತಾಪ್ ಸಿಂಹರನ್ನು ಕಾಂಗ್ರೆಸ್ ಟ್ಯಾಗ್ ಮಾಡಿದೆ. 

''ಚುನಾವಣೆ ಮುಂಚಿನ #BJPvsBJP ಕಾದಾಟವನ್ನು ಈಗಲೂ ಮುಂದುವರಿಸಿ, ನಿಮಗೆ ಅರ್ಹವಾಗಿದ್ದು ಅದೊಂದೇ!'' ಎಂದು ಕಾಂಗ್ರೆಸ್ ಕುಟುಕಿದೆ. 

Similar News