×
Ad

ರಾಯಚೂರು: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲೇ ಮೃತ್ಯು

Update: 2023-06-14 10:22 IST

ರಾಯಚೂರು, ಜೂ.14: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ಬುಧವಾರ ವರದಿಯಾಗಿದೆ.

ಮೃತರನ್ನು ಛತ್ತೀಸ್​ಗಢ ಮೂಲದವರಾದ ವಿಷ್ಣು (26), ಶಿವರಾಮ್(28), ಬಲರಾಮ್(30) ಎಂದು ಗುರುತಿಸಲಾಗಿದೆ. 

ಜಮೀನಿನಲ್ಲಿ ಬೋರ್‌ವೆಲ್ ಕೊರೆದು ಕಾಲುದಾರಿಯಲ್ಲಿಯೇ ರಾತ್ರಿ ಮೂವರು ಮಲಗಿದ್ದರೆನ್ನಲಾಗಿದ್ದು, ಈ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ, ಮೂವರು ಮೇಲೂ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ರಸ್ತೆ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತ್ಯು 

Similar News