×
Ad

ಮಂಡ್ಯ: ಮಹಿಳೆ ಆತ್ಮಹತ್ಯೆ

Update: 2023-06-15 00:03 IST

ಮಳವಳ್ಳಿ, ಜೂ.14: ಮನೆಯಲ್ಲಿ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಗ್ರಾಮದ ನಿವಾಸಿ ಎಚ್.ಎಂ.ಮದುಸೂಧನ್ ಎಂಬವರ ಪತ್ನಿ ಕೆ.ಆಶಾ(34) ಮೃತರು ಎಂದು ಗುರುತಿಸಲಾಗಿದೆ. ಹೊಸಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಇವರು, ಕಳೆದ ಒಂಬತ್ತು ವರ್ಷಗಳ ಹಿಂದೆ ಮಧುಸೂಧನ್ ನನ್ನು ಪ್ರೀತಿಸಿ ವಿವಾಹವಾಗಿದ್ದು, ಪತಿ,ಪತ್ನಿ ಆಗಿಂದಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

 ಈ ವಿಚಾರವಾಗಿ ಹಲವುಬಾರಿ ಹಿರಿಯರು ಸಂಧಾನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೇ ಇತ್ತೀಚೆಗೆ ಮಧುಸೂಧನ್ ಪತ್ನಿ ಆಶಾರನ್ನು ತವರುಮನೆಯಿಂದ ಹಣ ಪಡೆದು ಬರುವಂತೆ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಹೋದರ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Similar News