ಮತಾಂತರ ನಿಷೇಧ ಕಾಯ್ದೆ ರದ್ದು: ಸಚಿವ ಸಂಪುಟ ಸಭೆ ನಿರ್ಧಾರ
Update: 2023-06-15 16:22 IST
ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ಗುರುವಾರ ತೀರ್ಮಾನಿಸಿದೆ.
'ಬಿಜೆಪಿ ಸರ್ಕಾರ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಹಕ್ಕು ಕಾಯ್ದೆಯ ಹಿಂದಿನ ತಿದ್ದುಪಡಿ ವಾಪಸ್ ಪಡೆದು, ಜುಲೈ 3ರಿಂದ ಆರಂಭವಾಗುವ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡಲಾಗುತ್ತದೆ' ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ..; ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ವಾಪಸ್: ಸಚಿವ ಮಧು ಬಂಗಾರಪ್ಪ