×
Ad

‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂಗೆ ಧನ್ಯವಾದ ಸಲ್ಲಿಸಿದ ನಟ ಡಾಲಿ ಧನಂಜಯ

Update: 2023-06-15 18:35 IST

ಬೆಂಗಳೂರು: ಇತ್ತೀಚೆಗಷ್ಟೇ ತೆರೆಕಂಡಿದ್ದ ಶಶಾಂಕ್‌ ಸೋಗಲ್‌ ನಿರ್ದೇಶನದ ‘ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.  

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,'ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ "ಡೇರ್ ಡೆವಿಲ್ ಮುಸ್ತಫಾ" ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ' ಎಂದು ಚಿತ್ರತಂಡಕ್ಕೆ ಹಾರೈಸಿದ್ದಾರೆ.

ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಈ ಸಿನೆಮಾದ ವಿತರಕರೂ ಆಗಿರುವ ನಟ ಡಾಲಿ ಧನಂಜಯ, ''ಡೇರ್‌ ಡೆವಿಲ್‌ ನಂತಹ ಸಣ್ಣ ತಂಡದ ಕಡೆಗೆ ನೀವು ಕೊಟ್ಟ ಬೆಂಬಲಕ್ಕೆ ಧನ್ಯವಾದಗಳು ಸರ್. ಮುಖ್ಯಮಂತ್ರಿಗಳಿಂದ ಇಂತಹ ಗೌರವ ಪಡೆದ ಡೇರ್‌ ಡೆವಿಲ್‌ ಮುಸ್ತಫಾ ಚಿತ್ರ ತಂಡಕ್ಕೂ , ನಿರ್ದೇಶಕ ಶಶಾಂಕ್‌ ಸೋಗಲ್‌ ರಿಗೂ ಅಭಿನಂದನೆಗಳು'' ಎಂದು ತಿಳಿಸಿದ್ದಾರೆ. 

Similar News