×
Ad

ನಟ ಸುದೀಪ್ ವರುಣಾದಲ್ಲಿ ಪ್ರಚಾರಕ್ಕೆ ಬಾರದಂತೆ ತಡೆದದ್ದು ಸಿಎಂ ಸಿದ್ದರಾಮಯ್ಯ: ಪ್ರತಾಪ್ ಸಿಂಹ ಆರೋಪ

ಮತ್ತೊಮ್ಮೆ ಹೊಂದಾಣಿಕೆ ರಾಜಕಾರದ ಬಗ್ಗೆ ಆರೋಪ ಮಾಡಿದ ಸಂಸದ

Update: 2023-06-16 17:34 IST

ಮೈಸೂರು: ಚುನಾವಣೆ ಸಂದರ್ಭದಲ್ಲಿ ನಟ ಸುದೀಪ್ ಅವರು ವರುಣಾ ಕ್ಷೇತ್ರದ ಪ್ರಚಾರಕ್ಕೆ ಬಾರದಂತೆ ಸಿದ್ದರಾಮಯ್ಯ ಅವರು ತಡೆದಿದ್ದರು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಗೆಲ್ಲುವುದಕ್ಕಾಗಿ ಎಲ್ಲ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದರು. ಸುದೀಪ್, ಶ್ರೀರಾಮುಲು ಸೇರಿ ಕೆಲವು ಬಿಜೆಪಿ ನಾಯಕರನ್ನು ಕೂಡ ಪ್ರಚಾರಕ್ಕೆ ಬಾರದಂತೆ ತಡೆದಿದ್ದರು ಎಂದು ದೂರಿದರು.

'ತಮ್ಮ ಬಗ್ಗೆ ತೀಕ್ಷ್ಮವಾದ ಹೇಳಿಕೆ ಬಾರದಂತೆ ನೋಡಿಕೊಂಡಿದ್ದ ಸಿದ್ದರಾಮಯ್ಯ, ಯಾರ ಜೊತೆಗೆಲ್ಲಾ ಹೊಂದಾಣಿಕೆ ಮಾಡಿಕೊಂಡಿದ್ದರೆಂದು ಬಗಿರಂಗಪಡಿಸಲಿ' ಎಂದು ಸವಾಲು ಹಾಕಿದರು.  

ನಾನು ಭವಿಷ್ಯದ ಬಗ್ಗೆ ಚಿಂತೆ ಮಾಡುವುದಿಲ್ಲ, ಮುಂದೆಯೂ ನಾನೆ ಸಂಸದನಾಗಬೇಕು ನನ್ನ ಮಗಳನ್ನು ರಾಜಕೀಯಕ್ಕೆ ಕರೆದುಕೊಂಡು ಬರಬೇಕು ಎಂಬ ಯಾವುದೇ ಆಲೋಚನೆ ಇಲ್ಲ,ನಾನು ಏನು ಹೇಳಬೇಕೊ ಅದನ್ನು ಹೇಳುತ್ತೇನೆ ಎಂದರು.

ಇದನ್ನೂ ಓದಿಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು?: ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ಪರೋಕ್ಷ ವಾಗ್ದಾಳಿ

Similar News