ಮುಂಬೈನಲ್ಲಿ ರಾಷ್ಟ್ರೀಯ ಶಾಸಕರ ಸಮ್ಮೇಳನ: ಸ್ಪೀಕರ್ ಯು.ಟಿ. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭಾಗಿ
Update: 2023-06-16 22:37 IST
ಮಹಾರಾಷ್ಟ್ರ: ಮುಂಬೈನಲ್ಲಿ ಶುಕ್ರವಾರದಿಂದ ವಿದ್ಯುಕ್ತವಾಗಿ ಆರಂಭಗೊಂಡಿರುವ ಪ್ರಪ್ರಥಮ ರಾಷ್ಟ್ರೀಯ ಶಾಸಕರ ಸಮ್ಮೇಳನವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಉದ್ಘಾಟಿಸಿದರು.
ಸಮ್ಮೇಳನದಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಿದ್ದರು.
ಅಲ್ಲದೇ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್, ಲೋಕಸಭೆಯ ಮಾಜಿ ಸ್ಪೀಕರ್ ಗಳಾದ ಸುಮಿತ್ರಾ ಮಹಾಜನ್, ಡಾ.ಮೀರಾ ಕುಮಾರ್, ಶಿವರಾಜ್ ಪಾಟೀಲ್, ಡಾ.ಮನೋಹರ್ ಜೋಷಿ ಸೇರಿದಂತೆ ದೇಶದ ಪ್ರಮುಖ ಸಂಸದೀಯಪಟುಗಳು ಪಾಲ್ಗೊಂಡಿದ್ದರು.
ಶನಿವಾರ (ನಾಳೆ) ಸಮ್ಮೇಳನದ ಕೊನೆಯ ದಿನವಾಗಿದ್ದು, ವಿವಿಧ ಗೋಷ್ಠಿಗಳು, ಚರ್ಚೆ, ಚಿಂತನ-ಮಂಥನ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮಗಳು ಹಾಗೂ ಸಮಾರೋಪ ನಡೆಯಲಿದೆ.