×
Ad

ಕೇಂದ್ರ ಸರಕಾರ ನಮ್ಮ ಹಂಗಿನಿಂದ ಬದುಕುತ್ತಿದೆ: ದಿನೇಶ್ ಗುಂಡೂರಾವ್

Update: 2023-06-17 15:07 IST

ಬೆಂಗಳೂರು: ಕೇಂದ್ರ ಸರ್ಕಾರ ಅತ್ತೆ ಮನೆಯಲ್ಲ ಎಂಬ R.ಅಶೋಕ್ ಹೇಳಿಕೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಅತ್ತೆ ಮನೆಯಲ್ಲ ಎಂದು R.ಅಶೋಕ್ ಹೇಳಿದ್ದಾರೆ‌. ಕೇಂದ್ರ ಸರ್ಕಾರ ನಮಗೂ ಅತ್ತೆ ಮನೆಯಲ್ಲ, BJPಯವರಿಗೂ ಅತ್ತೆ ಮನೆಯಲ್ಲ. ನಾವು ಅಕ್ಕಿಯನ್ನು ಪುಕ್ಸಟ್ಟೆ ಕೊಡಿ ಎಂದು ಮಂಡಿಯೂರಿ ಭಿಕ್ಷೆ      ಬೇಡಿಲ್ಲ. ಅಧಿಕಾರಯುತವಾಗಿಯೇ ಮಾರುಕಟ್ಟೆ ದರಕ್ಕೆ ಅಕ್ಕಿ ಕೇಳಿದ್ದೇವೆ. ಮೊದಲು ಕೊಡಲು ಒಪ್ಪಿ ನಂತರ ನಿರಾಕರಿಸಿದ್ದೇಕೆ ಎಂದು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಅಶೋಕ್‌ರವರೇ, ಕೇಂದ್ರ ಬದುಕುತ್ತಿರುವುದು ನಮ್ಮ ಹಂಗಿನಿಂದಲೇ ಹೊರತು ನಾವು ಅವರ ಹಂಗಿನಲ್ಲಿಲ್ಲ. GST ಮೂಲಕ ನಮ್ಮ ರಾಜ್ಯ ಕೇಂದ್ರಕ್ಕೆ ಕೊಡುತ್ತಿರುವ ತೆರಿಗೆಯ ಪ್ರಮಾಣವೆಷ್ಟು,ಬದಲಿಗೆ ನಮಗೆ ಬರುತ್ತಿರುವ GST ಪಾಲು ಎಷ್ಟು ಎಂದು ರಾಜ್ಯದ ಜನರಿಗೆ ತಿಳಿಸಿ. ಪರಾವಲಂಬಿ ಜೀವಿ ಕೇಂದ್ರವೋ ಅಥವಾ ರಾಜ್ಯವೋ ಎಂದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.

Similar News