×
Ad

ಆಗುಂಬೆ ಘಾಟಿಯಲ್ಲಿ ಬಸ್‌-ಬೈಕ್‌ ಢಿಕ್ಕಿ; ಉಡುಪಿ ಮೂಲದ ಯುವಕ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಂಭೀರ ಗಾಯ

Update: 2023-06-18 18:56 IST

ಶಿವಮೊಗ್ಗ:  ಬೈಕ್‌ ಮತ್ತು ಬಸ್‌ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಗುಂಬೆ ಘಾಟಿಯಲ್ಲಿ ರವಿವಾರ ಸಂಭವಿಸಿದೆ.

ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಶಶಾಂಕ್‌ ಮೃತ ಯುವಕನಾಗಿದ್ದು, ಬೈಕ್ ನ ಹಿಂಬದಿ ಕುಳಿತಿದ್ದ ನಿರ್ಮಿತಾ ಎಂಬಾಕೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿ ಕಡೆಯಿಂದ ಉಡುಪಿ ಕಡೆಗೆ ಶಶಾಂಕ್‌ ಮತ್ತು ನಿರ್ಮಿತಾ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಆಗುಂಬೆ ಘಾಟಿಯ  12ನೇ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. 

ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Similar News