×
Ad

ಪ್ರಧಾನಿ ಮೋದಿಗೆ ತಾಲಿಬಾನ್ ಮೇಲಿರುವ ಪ್ರೀತಿ ಕರ್ನಾಟಕದ ಮೇಲೆ ಏಕಿಲ್ಲ: ಕಾಂಗ್ರೆಸ್

Update: 2023-06-19 15:48 IST

ಬೆಂಗಳೂರು: ಆಹಾರ ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳಿಗೆ ಕೇಂದ್ರ ಸರ್ಕಾರ 1.8 ಮಿಲಿಯನ್ ಟನ್ ರವಾನಿಸಿದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

18 ದೇಶಗಳಿಗೆ ರಫ್ತು ನಿಷೇಧದ ಹೊರತಾಗಿಯೂ ಭಾರತ 1.8 ಮಿಲಿಯನ್ ಟನ್ ಗೋಧಿಯನ್ನು ರವಾನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿಗೆ ತಾಲಿಬಾನ್ ಮೇಲಿರುವ ಪ್ರೀತಿ ಕರ್ನಾಟಕದ ಮೇಲೆ ಏಕಿಲ್ಲ? ಎಂದು ಪ್ರಶ್ನಿಸಿದೆ.

 ಅಪಘಾನಿಸ್ತಾನ ಸೇರಿ ಹಲವು ದೇಶಗಳಿಗೆ ಹಣ, ಧಾನ್ಯದ ಹೊಳೆ ಹರಿಸಿದ್ದಾರೆ ಮೋದಿ. ಇದೆಲ್ಲದರ ಹಿಂದೆ ಇರುವುದು ಮಾನವೀಯತೆಯಲ್ಲ, ಪ್ರಚಾರದ ಹಪಹಪಿತನ ಅಷ್ಟೇ. ವಿದೇಶಗಳಿಗೆ ಧಾನ್ಯ ದಾನ ಮಾಡುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹಣ ನೀಡಿದರೂ ಅಕ್ಕಿ ನೀಡಲು ಹಿಂದೇಟು ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

Similar News