×
Ad

ಬೆಂಗಳೂರಿನಲ್ಲಿ ರಸ್ತೆ ಅಪಘಾತ; ಕೊಡಗಿನ ಯುವಕ ಮೃತ್ಯು

Update: 2023-06-19 19:01 IST

ಮಡಿಕೇರಿ ಜೂ.19 : ಕಾರು ಅವಘಡದಲ್ಲಿ ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ವರದಿಯಾಗಿದೆ.

ಬಾಡಗರಕೇರಿ ಗ್ರಾಮದ  ಕುಪ್ಪುಡೀರ ಪೊನ್ನು ಮುತ್ತಪ್ಪ ಎಂಬವರ ಮಗ ಪ್ರಖ್ಯಾತ್ ಚಿಣ್ಣಪ್ಪ (21) ಮೃತ ಯುವಕ ಎಂದು ತಿಳಿದು ಬಂದಿದೆ. 

ಸೋಮವಾರ ಮುಂಜಾನೆ ಪ್ರಖ್ಯಾತ್ ಚಿಣ್ಣಪ್ಪ ಅವರಿದ್ದ ಕಾರು, ರಸ್ತೆ ಬದಿಯಲ್ಲಿದ್ದ ಮತ್ತೊಂದು ಕಾರಿಗೆ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

Similar News