ನಾ ನಾಯಕಿ ಅಥವಾ NO ನಾಯಕಿ?: ಮಹಿಳೆಯರಿಗೆ ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಕವಿತಾ ರೆಡ್ಡಿ ಆಕ್ರೋಶ
ಬೆಂಗಳೂರು, ಜೂ.19: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮಹಿಳೆಯರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ''ಇದುವರೆಗೂ ಮಹಿಳೆಯರಿಗೆ ಕಾಂಗ್ರೆಸಿನಲ್ಲಿ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಮತದಾರರ ಅಥವಾ ಜನಸಂಖ್ಯೆಯ 50% (ವಿಧಾನ) ಪರಿಷತ್ತಿಗೂ ಅಗತ್ಯವಿಲ್ಲ. ಮಹಿಳೆಕೇವಲ ಪಕ್ಷದ ಕೆಲಸಕ್ಕಾಗಿ, ಪ್ರಚಾರಕ್ಕಾಗಿ ಮತ್ತು ಮತಕ್ಕಾಗಿ ಮಾತ್ರ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. *ಜೊತೆಗೆ #NaNaayaki = #NoNaayaki ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ*.
ಕವಿತಾ ರೆಡ್ಡಿ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದ ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಸಿಕ್ಕಿರಲಿಲ್ಲ.
ಇದನ್ನೂ ಓದಿ... ವಿಧಾನ ಪರಿಷತ್ ಉಪ ಚುನಾವಣೆ; ಶೆಟ್ಟರ್ ಸೇರಿ ಮೂವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕಾಂಗ್ರೆಸ್