×
Ad

ಕೋಣ ತಿವಿದು ವ್ಯಕ್ತಿ ಮೃತ್ಯು

Update: 2023-06-19 23:51 IST

ದಾವಣಗೆರೆ, ಜೂ.19: ಕೋಣವೊಂದು ದಾಳಿ ನಡೆಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಎನ್.ಬಸವನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ಲಿಂಗದಹಳ್ಳಿಯ ಉಡುಸಲಾಂಬಾ ದೇವಿಯ ಜಾತ್ರಾ ಮಹೋತ್ಸವವು ನಡೆಯುತ್ತದೆ. ದೇವಿಗಾಗಿ ಬಿಟ್ಟಿದ್ದ ಕೋಣ ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಜಯ್ಯಪ್ಪ (48)ರ ಮೇಲೆ ದಾಳಿ ಮಾಡಿದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆಯುತ್ತಿದ್ದಂತೆಯೇ ಎನ್.ಬಸವನಹಳ್ಳಿ ಗ್ರಾಮಸ್ಥರು ಮೃತ ಜಯ್ಯಪ್ಪರ ಮೃತದೇಹವನ್ನು ಲಿಂಗದಹಳ್ಳಿ ಗ್ರಾಮದ ಸರ್ಕಲ್ ನಲ್ಲಿ ಇಟ್ಟು ಮೃತನ ಮನೆಯವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದಾಗ ದೇವಾಲಯ ಸಮಿತಿಯವರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಮೃತರ ಮಗನಿಗೆ ನೀರುಗಂಟಿಯ ಕೆಲಸವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News