×
Ad

'ಐಐಟಿ ಬಾಂಬೆ'ಗೆ 315 ಕೋಟಿ ರೂ. ದೇಣಿಗೆ ನೀಡಿದ ನಂದನ್ ನಿಲೇಕಣಿ

Update: 2023-06-20 23:13 IST

ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಅವರು ತಾವು ಎಂಜಿನಿಯರಿಂಗ್‌ ಪದವಿ ಪಡೆದ ‘ಐಐಟಿ ಬಾಂಬೆ‘ಗೆ 315 ಕೋಟಿ ರೂ.ದೇಣಿಗೆ ನೀಡಿದ್ದಾರೆ. 

ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆಯಲು 1973 ರಲ್ಲಿ ಐಐಟಿ ಬಾಂಬೆ ಸೇರಿದ್ದ  ನಿಲೇಕಣಿ, ತಾವು ಕಲಿತ ಕಾಲೇಜ್ ನೊಂದಿಗಿನ ಒಡನಾಟದ 50 ವರ್ಷಗಳ ನೆನಪಿಗಾಗಿ ಹೊಸ ದೇಣಿಗೆಯನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿ ಅವರು, ''ಈ ಸಂಸ್ಥೆ ನನಗೆ ಹೆಚ್ಚಿನದನ್ನು ನೀಡಿದೆ. ಇದರ ಗೌರವಾರ್ಥದ ನೆರವು ಇದಾಗಿದೆ. ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳೆಡೆಗಿನ ಬದ್ಧತೆಯಾಗಿದೆ'' ಎಂದು ಹೇಳಿದ್ದಾರೆ.

ಈ ಹಿಂದೆ ಅವರು ಐಐಟಿ ಬಾಂಬೆಗೆ 85 ಕೋಟಿ ರೂ.ದೇಣಿಗೆ ನೀಡಿದ್ದರು. ಇದರೊಂದಿಗೆ ಈ ಸಂಸ್ಥೆಗೆ ಹಳೆ ವಿದ್ಯಾರ್ಥಿ ನಿಲೇಕಣಿ ನೀಡಿದ ಒಟ್ಟು ದೇಣಿಗೆ 400 ಕೋಟಿ ರೂ. ಗೆ ತಲುಪಿದೆ. 

ಇದನ್ನೂ ಓದಿಅನ್ನ ಭಾಗ್ಯ ಯೋಜನೆ: ಕರ್ನಾಟಕಕ್ಕೆ ಅಕ್ಕಿ ಕೊಡಲು ಮುಂದೆ ಬಂದ ಪಂಜಾಬ್

Similar News