×
Ad

ಕಲಬುರಗಿ: ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 460 ಚೀಲ 'ಅನ್ನಭಾಗ್ಯ' ಅಕ್ಕಿ ವಶಕ್ಕೆ

Update: 2023-06-20 23:58 IST

ಕಲಬುರಗಿ: ಮಹಾರಾಷ್ಟ್ರದ ಪನವೇಲ್‍ಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 460 ಚೀಲ ಅಕ್ಕಿಯನ್ನು ಇಲ್ಲಿನ ಚೌಕ್ ಪೊಲೀಸರು ಜಪ್ತಿ ಮಾಡಿರುವುದಾಗಿ ಮಂಗಳವಾರ ವರದಿಯಾಗಿದೆ. 

ನಗರದ ಫಿಲ್ಟರ್‍ಬೆಡ್‍ನ ಸೇವಾಲಾಲ್ ಚೌಕ್ ಹತ್ತಿರ ಲಾರಿ ಮತ್ತು ಅಕ್ಕಿಯನ್ನು ಜಪ್ತಿ ಮಾಡಿ ಲಾರಿ ಚಾಲಕ ರಾಜೇಂದ್ರ ಸಿಖಡೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಲಾರಿಯಲ್ಲಿ ಮಹಾರಾಷ್ಟ್ರಕ್ಕೆ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಅಕ್ಕಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Similar News