ಬಾಗಲಕೋಟೆ ಉಪ ಚುನಾವಣೆ: ಬಿರುಸಿನ ಮತದಾನ
Update: 2026-04-09 10:32 IST
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಇಂದು ಉಪ ಚುನಾವಣೆ ಶಾಂತಿಯುತವಾಗಿ ಆರಂಭಗೊಂಡಿದೆ. 9 ಗಂಟೆ ವೇಳೆ 11.87 ಶೇ. ಮತದಾನವಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರು ತಿಮ್ಮಾಪೂರ ಗ್ರಾಮದ ಮತಗಟ್ಟೆ ಸಂಖ್ಯೆ 39ರಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸರಕಾರಿ ಶಾಲೆ ನಂಬರ್ 4 ರಲ್ಲಿ ಹಕ್ಕು ಚಲಾಯಿಸಿದರು.
ಬಾಗಲಕೋಟೆ ಮತ ಕ್ಷೇತ್ರದಲ್ಲಿ ಒಟ್ಟು 322 ಮತಗಟ್ಟೆಗಳಲ್ಲಿ ಪಿಂಕ್ ಹಾಗೂ ಯುವ ಮತದಾನ ಕೇಂದ್ರ ಗಮನ ಸೆಳೆಯುತ್ತಿದೆ. ಬೆಳಗಿನ ಜಾವದಿಂದಲೇ ಎಲ್ಲ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ಸಾಗಿದ್ದು, ಯುವ ಮತದಾರರು, ಮಹಿಳೆಯರು, ಹಿರಿಯ ನಾಗಕರಿಕರು ಹುಮ್ಮಸ್ಸಿನಿಂದ ಮತ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಚುನಾವಣೆಗೆ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.