×
Ad

ಬ್ಯಾರಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

Update: 2025-10-31 23:59 IST
ಸಾಂದರ್ಭಿಕ ಚಿತ್ರ

ಬೆಂಗಳೂರು : ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ಸ್, ಬೆಂಗಳೂರು ವತಿಯಿಂದ ಪ್ರತಿ ವರ್ಷ ನಡೆಯುವ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಅರ್ಹ ಬ್ಯಾರಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ (ರಾಜ್ಯ/ಸಿಬಿಎಸ್‌ಇ/ಐಸಿಎಸ್‌ಇ) ಪರೀಕ್ಷೆಯಲ್ಲಿ ಕನಿಷ್ಠ ಶೇ.95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-11-2025

ಅರ್ಜಿ ಸಲ್ಲಿಸುವ ವಿಧಾನ: ಅರ್ಜಿ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಪ್ರತ್ಯಕ್ಷವಾಗಿ ಫೋನ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ವಿಳಾಸ: ದಿ ಬ್ಯಾರಿಸ್ ಆಮಿಟಿ ಎದುರು ಬಿಡಿಎ ಕಾಂಪ್ಲೆಕ್ಸ್ ಫಸ್ಟ್ ಸ್ಟೇಜ್, ಥರ್ಡ್ ಬ್ಲಾಕ್, ಎಚ್‌ಬಿಆರ್ ಲೇಔಟ್ ಬೆಂಗಳೂರು - 560043  (The Bearys' Amity, Opp. BDA Complex, 1st Stage, 3rd Block, HBR Lay-out, Bengaluru – 560043) ಗೆ ಅರ್ಜಿ ಸಲ್ಲಿಸಬಹುದು.

ಇಮೇಲ್‌ : beary.bhavan@gmail.com ಫೋನ್‌ ಸಂಖ್ಯೆ 7259966404ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News