ರಾಜ್ಯದ ಇಬ್ಬರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ʼದಕ್ಷತಾ ಪದಕʼ
Update: 2025-11-02 22:09 IST
ಬೆಂಗಳೂರು : 2025ನೇ ಸಾಲಿನ ಕೇಂದ್ರ ಗೃಹಮಂತ್ರಿಯವರ ದಕ್ಷತಾ ಪದಕಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್ ರಾಥೋಡ್ ಮತ್ತು ಸುದ್ದಗುಂಟೆಪಾಳ್ಯ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ರಮೇಶ್ ಬಸನಗೌಡ ಛಾಯಗೋಳ ಅವರುಗಳು ಭಾಜನರಾಗಿದ್ದಾರೆ.
ಕರ್ತವ್ಯ ನಿಷ್ಠೆಯಿಂದ ಉತ್ತಮ ತನಿಖಾ ಕಾರ್ಯವನ್ನು ನಿರ್ವಹಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ಇಬ್ಬರಿಗೂ ನೀಡಿ ಗೌರವಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.