×
Ad

ಆನೇಕಲ್ | ಕೆರೆಯಂಗಳದಲ್ಲಿ ಮಾನವ ಕಳೇಬರ ಪತ್ತೆ

Update: 2026-05-16 11:33 IST

ಆನೇಕಲ್: ಆನೇಕಲ್ ಪೊಲೀಸ್ ಉಪವಿಭಾಗದ ಸರ್ಜಾಪುರ ಠಾಣಾ ವ್ಯಾಪ್ತಿಯ ಮುಗಳೂರು ಕೆರೆಯಲ್ಲಿ ಮಾನವ ಕಳೇಬರ ಪತ್ತೆಯಾಗಿದೆ.

ಶುಕ್ರವಾರ ಕುರಿಗಾಹಿಗಳು ಕೆರೆಯಂಗಳದಲ್ಲಿ ಕುರಿ ಮೇಯಿಸುವ ಸಂದರ್ಭದಲ್ಲಿ ತಲೆಬುರುಡೆ, ಮೂಳೆಗಳು ಪತ್ತೆಯಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಾಯಿಗಳು ಎಳೆದಾಡಿರುವ ಸಾಧ್ಯತೆಯಿದೆ ಎಂದು ಸ್ಥಳಕ್ಕೆ ಆಗಮಿಸಿದ ಅಡಿಶನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಮಗಿಳೆಯ ಸೀರೆ ದೊರೆತಿರುವುದರಿಂದ ಇದು ಮಹಿಳೆಯ ಅಸ್ತಿಪಂಜರ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಸೋಕೋ ತಂಡ ಆಗಮಿಸಿದ್ದು, ಬುರುಡೆ ಮತ್ತು ಮೂಳೆಗಳ ಪರಿಶೀಲನೆಯಲ್ಲಿ ತೊಡಗಿವೆ.

ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ನೂತನ ಸರ್ಜಾಪುರ ಪೊಲೀಸ್ ಇನ್ ಸ್ಪೆಕ್ಟರ್ ಮಹೇಂದ್ರ ಕುಮಾರ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News