×
Ad

Bengaluru | 10 ಲಕ್ಷ ಮೌಲ್ಯದ ಜಿಂಕೆ ಕೊಂಬು ಜಪ್ತಿ: ಮೂವರ ಬಂಧನ

Update: 2026-05-12 23:35 IST

ಸಾಂದರ್ಭಿಕ ಚಿತ್ರ | Image by user15245033 on Magnific

ಬೆಂಗಳೂರು, ಮೇ 12: ಸಿಸಿಬಿ ಹಾಗೂ ಚಿಕ್ಕಬಾಣಾವರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 1 ಜಿಂಕೆ ಕೊಂಬನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ಕೃಷ್ಣಗಿರಿ ಜಿಲ್ಲೆಯ ಮುರುಳಿ(29), ಬೆಂಗಳೂರಿನ ಮಾರೇನಹಳ್ಳಿಯ ಮಂಜುನಾಥ(39), ಚಿಕ್ಕಸಂದ್ರದ ಕಾರ್ಯಪ್ಪ(53) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಚಿಕ್ಕಬಾಣಾವರದ ಕಾಲೇಜೊಂದರ ಸಮೀಪ ಕಾಡು ಪ್ರಾಣಿಯ ಕೊಂಬನ್ನು ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಸಂಘಟಿತ ಅಪರಾಧ ದಳ(ಪೂರ್ವ)ದ ಅಧಿಕಾರಿಗಳು ಹಾಗೂ ಚಿಕ್ಕಬಾಣಾವರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಸ್ಥಳದ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿ, ಜಿಂಕೆ ಕೊಂಬನ್ನು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮೂವರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕೃತ್ಯ ವೆಸಗಿರುವುದಾಗಿ ಹೇಳಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯ ವ್ಯಕ್ತಿಯೊಬ್ಬ ಈ ಜಿಂಕೆ ಕೊಂಬು ತಂದು ಕೊಟ್ಟಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇನ್ನು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗಾಗಿ ಶೋಧ ಮುಂದುವರೆದಿದ್ದು, ಬಂಧಿತ ಮೂವರ ಪೈಕಿ ಒಬ್ಬನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದು, ಉಳಿದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News