ಬೆಂಗಳೂರು: ಬಿಸಿಲ ಬೇಗೆಯ ಮಧ್ಯೆಯೇ ಹಕ್ಕು ಚಲಾಯಿಸಿದ ಮತದಾರರು

Update: 2024-04-26 05:10 GMT

ಬೆಂಗಳೂರು, ಎ. 26: ಬೇಸಿಗೆ ಬಿಸಿಲಿನ ಅಬ್ಬರದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಉದ್ದದ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ಬೆಳಗ್ಗೆ ಎಂಟು ಗಂಟೆಯಿಂದಲೇ ಬಿಸಿಲು ಉದ್ಯಾನನಗರಿಯ ಜನರನ್ನು ಕಂಗೆಡಿಸಿದೆ. ಹೀಗಾಗಿ ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಲು ಮತದಾರರು ಮತಗಟ್ಟೆಗಳಿಗೆ ಅತ್ಯಂತ ಉತ್ಸಾಹದಿಂದಲೇ ಆಗಮಿಸಿ ಹಕ್ಕು ಚಲಾವಣೆ ಮಾಡಿ ಸಂಭ್ರಮಿಸಿದರು.

ಯುವ ಮತದಾರರು, ಹಿರಿಯ ನಾಗರಿಕರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತ ಮತ ಹಾಕಿದರು. ನಗರದಲ್ಲಿ ಯಾವುದೇ ಅಹಿತಕರ ಘಟನೆ, ಗೊಂದಲಗಳಿಲ್ಲದೆ ತಮ್ಮ ಹಕ್ಕು ಚಲಾಯಿಸಿದರು.

1929 ರಲ್ಲಿ ಜನಿಸಿರುವ 94 ವರ್ಷದ ಹಿರಿಯ ನಾಗರಿಕರಾದ ನಿವೃತ್ತ ಏರ್ ಮಾರ್ಷಲ್ ಪಿ.ವಿ ಅಯ್ಯರ್ ಅವರು ಇಂದು ಬೆಂಗಳೂರಿನಲ್ಲಿಂದು ಮತ ಚಲಾಯಿಸಿದರು.




 



ವಿಶೇಷ ಚೇತನರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 226 ವಾರ್ಡಿನಲ್ಲಿ ಮತದಾನ ಚಲಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News